ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವೆಂಬ
ಐದಂಗವಿಲ್ಲದಂದು,
ತಾರಕಾಕೃತಿ ದಂಡಕಾಕೃತಿ
ಕುಂಡಲಾಕೃತಿ ಅರ್ಧಚಂದ್ರಾಕೃತಿ ಬಿಂದ್ವಾಕೃತಿಯೆಂಬ
ಪಂಚಕೃತಿಗಳಿಲ್ಲದಂದು,
ಮನಜ್ಞಾನ ಸುಜ್ಞಾನ ಪರಮಜ್ಞಾನ
ಮಹಾಜ್ಞಾನ ಸ್ವಯಜ್ಞಾನವೆಂಬ
ಪಂಚಜ್ಞಾನವಿಲ್ಲದಂದು ಅತ್ತತ್ತಲೆ,
ನಿಃಶೂನ್ಯ ನಿರಾಮಯ ನಿರಾಳ ನಿಷ್ಕಲಲಿಂಗ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Sattu cittānanda nityaparipūrṇavemba
aidaṅgavilladandu,
tārakākr̥ti daṇḍakākr̥ti
kuṇḍalākr̥ti ardhacandrākr̥ti bindvākr̥tiyemba
pan̄cakr̥tigaḷilladandu,
manajñāna sujñāna paramajñāna
mahājñāna svayajñānavemba
pan̄cajñānavilladandu attattale,
niḥśūn'ya nirāmaya nirāḷa niṣkalaliṅga tānē nōḍā
jhēṅkāra nijaliṅgaprabhuve.