ರೇಚಕ ಪೂರಕಂಗಳಿಲ್ಲದಂದು,
ನೋಟ ಬೇಟಂಗಳಿಲ್ಲದಂದು,
ಮಾಟ ಕೂಟಂಗಳಿಲ್ಲದಂದು,
ಶಬ್ದ ನಿಃಶಬ್ದಂಗಳಿಲ್ಲದಂದು,
ಭಾವ ನಿರ್ಭಾವಗಳಿಲ್ಲದಂದು,
ತತ್ವ ಪರತತ್ವಂಗಳಿಲ್ಲದಂದು,
ಇವೇನೇನೂ ಇಲ್ಲದಂದು, ಅತ್ತತ್ತಲೆ.
ಸ್ವಯಂಭೂ ಅಖಂಡತೇಜೋಮಯ
ನಿಷ್ಕಲಲಿಂಗ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Rēcaka pūrakaṅgaḷilladandu,
nōṭa bēṭaṅgaḷilladandu,
māṭa kūṭaṅgaḷilladandu,
śabda niḥśabdaṅgaḷilladandu,
bhāva nirbhāvagaḷilladandu,
tatva paratatvaṅgaḷilladandu,
ivēnēnū illadandu, attattale.
Svayambhū akhaṇḍatējōmaya
niṣkalaliṅga tānē nōḍā
jhēṅkāra nijaliṅgaprabhuve.