ಆರುಲಿಂಗದಲ್ಲಿ ಅರಿದಿಹೆನೆಂಬ
ಆರುಹುಗೇಡಿಗಳು ನೀವು ಕೇಳಿರೊ!
ಆರುಲಿಂಗ ನಿಮಗೆಲ್ಲಿಹವು? ಅದೆಂತೆಂದಡೆ:
ಆಚಾರಲಿಂಗ ಬ್ರಹ್ಮಂಗೆ ಸಂಬಂಧ,
ಗುರುಲಿಂಗ ವಿಷ್ಣುವಿಂಗೆ ಸಂಬಂಧ,
ಶಿವಲಿಂಗ ರುದ್ರಂಗೆ ಸಂಬಂಧ,
ಜಂಗಮಲಿಂಗ ಈಶ್ವರಂಗೆ ಸಂಬಂಧ,
ಪ್ರಸಾದಲಿಂಗ ಸದಾಶಿವಂಗೆ ಸಂಬಂಧ,
ಮಹಾಲಿಂಗ ಪರಶಿವಂಗೆ ಸಂಬಂಧ,
ಇಂತಾರುಲಿಂಗ ಆರುದರುಶನಕ್ಕೆ ಸಂಬಂಧ.
ನಿಮ್ಮ ಸಂಬಂಧವ ನೀವು ಬಲ್ಲಿರೆ ಹೇಳಿರೊ!
ಅರಿಯದಿರ್ದಡೆ ಕೇಳಿರೊ!
ಗುರುಲಿಂಗ ಜಂಗಮವೆಂಬ
ತ್ರಿವಿಧ ಸಂಬಂಧವ ತಿಳಿದು,
ಆರು ಪರಿಯ ಶಿಲೆಯಂ ಮೆಟ್ಟಿ,
ಮೂರು ಬಾಗಿಲ ತೆರೆದು,
ಶ್ರೀ ಗುರುವಿನ ಪ್ರಸಾದವ ಸವಿದು,
ಮುಂದಿರ್ದ ಲಿಂಗಸಂಗವ ಮಾಡಿ,
ಆ ಪ್ರಥಮಶಿವನೆಂಬ ಜಂಗಮವ
ನೋಡುತ್ತಾ ನೋಡುತ್ತಾ ನಿಬ್ಬೆರಗಾಗಬೇಕು!
ಇದು ಕಾರಣ, ಆರುಮೂರುಗಳೆಂಬ ಮರವೆಯ ಹರಿದು,
ತಟ್ಟುಮುಟ್ಟುಗಳೆಂಬ ಭ್ರಮೆಯ ಜರೆದು,
ಅಂಗಲಿಂಗವೆಂಬ ದ್ವಂದ್ವವ ಹಿಂಗಿ
ನಿಸ್ಸಂಗಿಯಾಗಿರ್ದೆನಯ್ಯಾ ಗುಹೇಶ್ವರಾ!
Transliteration Āruliṅgadalli aridihenemba
āruhugēḍigaḷu nīvu kēḷiro!
Āruliṅga nimagellihavu? Adentendaḍe:
Ācāraliṅga brahmaṅge sambandha,
guruliṅga viṣṇuviṅge sambandha,
śivaliṅga rudraṅge sambandha,
jaṅgamaliṅga īśvaraṅge sambandha,
prasādaliṅga sadāśivaṅge sambandha,
mahāliṅga paraśivaṅge sambandha,
intāruliṅga ārudaruśanakke sambandha.
Nim'ma sambandhava nīvu ballire hēḷiro!
Ariyadirdaḍe kēḷiro!
Guruliṅga jaṅgamavemba
trividha sambandhava tiḷidu,
āru pariya śileyaṁ meṭṭi,
mūru bāgila teredu,
śrī guruvina prasādava savidu,
mundirda liṅgasaṅgava māḍi,
ā prathamaśivanemba jaṅgamava
nōḍuttā nōḍuttā nibberagāgabēku!
Idu kāraṇa, ārumūrugaḷemba maraveya haridu,
taṭṭumuṭṭugaḷemba bhrameya jaredu,
aṅgaliṅgavemba dvandvava hiṅgi
nis'saṅgiyāgirdenayyā guhēśvarā!
Hindi Translation छः लिंगों को जाने कहेंअज्ञानी तुम सुनो!
छः लिंग तुम्हें कहाँ हैं?
वह कैसे कहें तो —
आचार लिंग ब्रह्म संबंध,
गुरु लिंग विष्णु संबंध,
शिवलिंग रूद्र संबंध,
जंगम लिंगईश्वर संबंध,
प्रसाद लिंग सदाशिव संबंध,
महालिंग परशिव संबंध
ऐसे छः लिंग छः दर्शन संबंध,
तुम्हारा संबंध तुम जानते हो बताओ ।
न जानते हो तो सुनो।
गुरु लिंग जंगम जैसे त्रिविध संबंध जाने
छःप्रकार की शिला दबाकर, तीन दरवाजा खोले,
श्रीगुरु का प्रसाद चखकर, सामने रहा लिंग संग कर
उस प्रथम शिव कहे जंगम को देखते-देखते विस्मय होना है ।
इस कारण छः तीन जैसे अज्ञान दूर कर,
धूत का भ्रम अवहेलना कर,
अंग लिंग जैसे द्वंद्व मिटाकर
निस्संगि बना था गुहेश्वरा।
Translated by: Eswara Sharma M and Govindarao B N