ಆರು ಸ್ಥಲದಲ್ಲಿ ಅರಿತಿಹೆನೆಂದು
ಸಹಭೋಜನದಲ್ಲಿ ಉಂಬ ಅಣ್ಣಗಳು ನೀವು ಕೇಳಿರೊ!
ಅಂಗದ ಮೇಲೆ ಲಿಂಗಸಂಬಂಧಿಯಾದಡೇನಯ್ಯ,
ಆ ಲಿಂಗವ ತನ್ನ ಪ್ರಾಣಕ್ಕೆ ಅವಧರಿಸದನ್ನಕ್ಕ!
ಆ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರ
ಬಾಹ್ಯಕ್ರೀಯ ಮಾಡಿದಡೇನಯ್ಯ ನೈಷ್ಠೆ ಇಲ್ಲದನ್ನಕ್ಕ
ಅಷ್ಟಮದಂಗಳ ನಷ್ಟವ ಮಾಡಿ
ಪಂಚೇಂದ್ರಿಯಂಗಳ ಲಿಂಗಮುಖವ ಮಾಡಿ
ದೇಹೇಂದ್ರಿಯ ಮನ ಪ್ರಾಣಾದಿಗಳ ಪ್ರಕೃತಿಯನಳಿದು,
ಇಷ್ಟ ಪ್ರಾಣ ಭಾವವೆಂಬ ತ್ರಿವಿಧ ಲಿಂಗಕ್ಕೆ
ರೂಪು ರುಚಿ ತೃಪ್ತಿಯನೀವ
ವರ್ಮಾದಿವರ್ಮಂಗಳ ಭೇದವನರಿಯದೆ,
ಕರಸ್ಥಲದಲ್ಲಿ ಲಿಂಗವಿಡಿದು
ಸಹಭೋಜನವೆಂದು ಒಂದಾಗಿ ಉಂಡು
ತಮ್ಮ ಒಡಲ ಹೊರೆವ ಲಿಂಗದ್ರೋಹಿಗಳ ನೋಡಿ
ನಗುತ್ತಿರ್ದೆನಯ್ಯಾ ಗುಹೇಶ್ವರಾ.
Hindi Translationषट्स्थलों को जाने कहके
सहभोजन में खाने भाईयों तुम सुनो।
अंग पर लिंग संबंधि हो तो क्या अय्या ।
उस लिंग को अपने प्राण में स्वीकार न करने तक ।
उस इष्टालिंग को अष्टविधार्चन षोडशोपचार
बाह्यक्रिया करने से क्या अय्या निष्टा न रहने तक।
अष्टमदों को नाश कर पंचेंद्रियों को लिंग मुख कर
देहेंद्रिय मन प्राणादियों की प्रकृति मिटाकर !
इष्ट प्राण भाव जैसे त्रिविध लिंग को
रूप रुचि तृप्ति देनेवाले रहस्य का भेद न जाने!
करस्थल में लिंग अपनाकर सहभोजन करके
मिलकर खाये अपने पेठ पालने लिंग द्रोहियोंको
देख हँस रहा हूँ अय्या गुहेश्वरा।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura