ಪರತತ್ವದಲ್ಲಿ ಬೆರಸಿಪ್ಪ ಭೇದವನು
ಸಹಜ ಸಮ್ಯಕ್ ಜ್ಞಾನದಿಂದ ತಿಳಿದು,
ನಿರಂಜನದೇಶಕೆ ಹೋಗಿ,
ನಿರಪೇಕ್ಷಲಿಂಗದಲ್ಲಿ ಕೂಡಿ
ನಿಃಸಂಗ ನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Paratatvadalli berasippa bhēdavanu
sahaja samyak jñānadinda tiḷidu,
niran̄janadēśake hōgi,
nirapēkṣaliṅgadalli kūḍi
niḥsaṅga nirāḷanāda nōḍā
jhēṅkāra nijaliṅgaprabhuve.