ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬ
ಷಡ್ವಿಧಮೂರ್ತಿಗಳಿಗೂ ಷಡ್ವಿಧಲಿಂಗವ ಕಂಡೆನಯ್ಯ
ಅದು ಹೇಗೆಂದಡೆ:
ಭಕ್ತಂಗೆ ಆಚಾರಲಿಂಗ, ಮಹೇಶ್ವರಂಗೆ ಗುರುಲಿಂಗ,
ಪ್ರಸಾದಿಗೆ ಶಿವಲಿಂಗ, ಪ್ರಾಣಲಿಂಗಿಗೆ ಜಂಗಮಲಿಂಗ,
ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗ.
ಈ ಷಡ್ವಿಧಲಿಂಗಕೂ ಷಡ್ವಿಧಶಕ್ತಿಯ ಕಂಡೆನಯ್ಯ
ಅದು ಹೇಗೆಂದಡೆ:
ಆಚಾರಲಿಂಗಕ್ಕೆ ಕ್ರಿಯಾಶಕ್ತಿ, ಗುರುಲಿಂಗಕ್ಕೆ ಜ್ಞಾನಶಕ್ತಿ,
ಶಿವಲಿಂಗಕ್ಕೆ ಇಚ್ಚಾಶಕ್ತಿ, ಜಂಗಮಲಿಂಗಕ್ಕೆ ಆದಿಶಕ್ತಿ,
ಪ್ರಸಾದಲಿಂಗಕ್ಕೆ ಪರಾಶಕ್ತಿ, ಮಹಾಲಿಂಗಕ್ಕೆ ಚಿಚ್ಚಕ್ತಿ.
ಈ ಷಡ್ವಿಧಶಕ್ತಿಯರಿಗೂ ಷಡ್ವಿಧಭಕ್ತಿಯ ಕಂಡೆನಯ್ಯ.
ಅದು ಹೇಗೆಂದಡೆ:
ಕ್ರಿಯಾಶಕ್ತಿಗೆ ಸದ್ಭಕ್ತಿ, ಜ್ಞಾನಶಕ್ತಿಗೆ ನೈಷ್ಠಿಕಭಕ್ತಿ,
ಇಚ್ಚಾಶಕ್ತಿಗೆ ಸಾವಧಾನ ಭಕ್ತಿ, ಆದಿಶಕ್ತಿಗೆ ಅನುಭಾವಭಕ್ತಿ,
ಪರಾಶಕ್ತಿಗೆ ಸಮರತಿ(ಆನಂದ)ಭಕ್ತಿ, ಚಿತ್ ಶಕ್ತಿಗೆ ಸಮರಸಭಕ್ತಿ.
ಈ ಷಡ್ವಿಧ ಭಕ್ತಿಗೆ ಷಡ್ವಿಧಹಸ್ತವ ಕಂಡೆನಯ್ಯ.
ಅದು ಹೇಗೆಂದಡೆ:
ಸದ್ಭಕ್ತಿಗೆ ಸುಚಿತ್ತಹಸ್ತ, ನೈಷ್ಠಿಕಭಕ್ತಿಗೆ ಸುಬುದ್ಧಿಹಸ್ತ,
ಸಾವಧಾನಭಕ್ತಿಗೆ ನಿರಹಂಕಾರಹಸ್ತ, ಅನುಭಾವ ಭಕ್ತಿಗೆ ಸುಮನಹಸ್ತ,
ಸಮರತಿಭಕ್ತಿಗೆ ಸುಜ್ಞಾನಹಸ್ತ, ಸಮರಸಭಕ್ತಿಗೆ ನಿರ್ಭಾವಹಸ್ತ.
ಈ ಷಡ್ವಿಧ ಹಸ್ತಂಗಳಿಗೂ ಷಡ್ವಿಧಕಲೆಗಳ ಕಂಡೆನಯ್ಯ.
ಅದು ಹೇಗೆಂದಡೆ:
ಸುಚಿತ್ತಹಸ್ತಕ್ಕೆ ನಿವೃತ್ತಿಕಲೆ, ಸುಬುದ್ಧಿ ಹಸ್ತಕ್ಕೆ ಪ್ರತಿಷ್ಠಾಕಲೆ,
ನಿರಹಂಕಾರಹಸ್ತಕ್ಕೆ ವಿದ್ಯಾಕಲೆ, ಸುಮನಹಸ್ತಕ್ಕೆ ಶಾಂತಿಕಲೆ,
ಸುಜ್ಞಾನಹಸ್ತಕ್ಕೆ ಶಾಂತ್ಯತೀತಕಲೆ,
ನಿರ್ಭಾವಹಸ್ತಕ್ಕೆ ಶಾಂತ್ಯತೀತೋತ್ತರಕಲೆ,
ಈ ಷಡ್ವಿಧಕಲೆಗಳಿಗೂ ಷಡ್ವಿಧ[ಜ್ಞಾನ]ಸಂಬಂಧವ ಕಂಡೆನಯ್ಯ.
ಅದು ಹೇಗೆಂದಡೆ:
ನಿವೃತ್ತಿಕಲೆಗೆ ಶುದ್ಧಜ್ಞಾನವೇ ಸಂಬಂಧ,
ಪ್ರತಿಷ್ಠಾಕಲೆಗೆ ಬದ್ಧಜ್ಞಾನವೇ ಸಂಬಂಧ,
ವಿದ್ಯಾಕಲೆಗೆ ನಿರ್ಮಲಜ್ಞಾನವೇ ಸಂಬಂಧ,
ಶಾಂತಿಕಲೆಗೆ ಮನಜ್ಞಾನವೇ ಸಂಬಂಧ,
ಶಾಂತ್ಯತೀತಕಲೆಗೆ ಸುಜ್ಞಾನವೇ ಸಂಬಂಧ,
ಶಾಂತ್ಯತೀತೋತ್ತರಕಲೆಗೆ ಪರಮಜ್ಞಾನವೇ ಸಂಬಂಧ.
ಈ ಷಡ್ವಿಧಸಂಬಂಧಗಳಿಂದತ್ತ ಮಹಾಘನ
ಅಗಮ್ಯ ಅಗೋಚರ ಅಪ್ರಮಾಣ
ನಿರಾಕುಳ ನಿರಂಜನಲಿಂಗ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Bhakta mahēśvara prasādi prāṇaliṅgi śaraṇaikyaremba
ṣaḍvidhamūrtigaḷigū ṣaḍvidhaliṅgava kaṇḍenayya
adu hēgendaḍe:
Bhaktaṅge ācāraliṅga, mahēśvaraṅge guruliṅga,
prasādige śivaliṅga, prāṇaliṅgige jaṅgamaliṅga,
śaraṇaṅge prasādaliṅga, aikyaṅge mahāliṅga.
Ī ṣaḍvidhaliṅgakū ṣaḍvidhaśaktiya kaṇḍenayya
adu hēgendaḍe:
Ācāraliṅgakke kriyāśakti, guruliṅgakke jñānaśakti,
śivaliṅgakke iccāśakti, jaṅgamaliṅgakke ādiśakti,
prasādaliṅgakke parāśakti, mahāliṅgakke ciccakti.
Ī ṣaḍvidhaśaktiyarigū ṣaḍvidhabhaktiya kaṇḍenayya.
Adu hēgendaḍe:
Kriyāśaktige sadbhakti, jñānaśaktige naiṣṭhikabhakti,
iccāśaktige sāvadhāna bhakti, ādiśaktige anubhāvabhakti,
parāśaktige samarati(ānanda)bhakti, cit śaktige samarasabhakti.
Ī ṣaḍvidha bhaktige ṣaḍvidhahastava kaṇḍenayya.
Adu hēgendaḍe:
Sadbhaktige sucittahasta, naiṣṭhikabhaktige subud'dhihasta,
sāvadhānabhaktige nirahaṅkārahasta, anubhāva bhaktige sumanahasta,
samaratibhaktige sujñānahasta, samarasabhaktige nirbhāvahasta.
Ī ṣaḍvidha hastaṅgaḷigū ṣaḍvidhakalegaḷa kaṇḍenayya.