ಆದಿಯಲ್ಲಿ ಉದಯವಾದ ದೇವನು,
ಮೂರಾರು ದೇಶವ ನೋಡಿ,
ಆರು ದೇಶದಲ್ಲಿ ಅಂಗವ ಸಂಬಂಧಿಸಿ,
ಮೂರು ದೇಶದಲ್ಲಿ ಲಿಂಗವ ಸಂಬಂಧಿಸಿ,
ಅಂಗಲಿಂಗಸಂಬಂಧವ ಗರ್ಭೀಕರಿಸಿಕೊಂಡು
ಪರವಶದಲ್ಲಿ ನಿಂದು, ಪರಕೆಪರವನೈದ
ಮಹಾಬ್ರಹ್ಮವೆನಿಸಿದನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Ādiyalli udayavāda dēvanu,
mūrāru dēśava nōḍi,
āru dēśadalli aṅgava sambandhisi,
mūru dēśadalli liṅgava sambandhisi,
aṅgaliṅgasambandhava garbhīkarisikoṇḍu
paravaśadalli nindu, parakeparavanaida
mahābrahmavenisidanu nōḍā
jhēṅkāra nijaliṅgaprabhuve.