ಒಂದು ಮುಳ್ಳುಮೊನೆಯ ಮೇಲೆ
ಅರವತ್ತು ಆರು ಕೋಟಿ ಪಟ್ಟಣಂಗಳು ಪುಟ್ಟಿಇದ್ದಾವು ನೋಡಾ !
ಪಾತಾಳಲೋಕದಲ್ಲಿ ಆಧಾರವೆಂಬ ಠಾಣ್ಯ;
ಬ್ರಹ್ಮನೆಂಬ ಮುಜುಮದಾರ.
ಮರ್ತ್ಯಲೋಕದಲ್ಲಿ ಸ್ವಾಧಿಷ್ಠವೆಂಬ ಠಾಣ್ಯ;
ವಿಷ್ಣುವೆಂಬ ಹುದ್ದೆಯದಾರ.
ಸ್ವರ್ಗಲೋಕದಲ್ಲಿ ಮಣಿಪೂರಕವೆಂಬಠಾಣ್ಯ;
ರುದ್ರನೆಂಬ ಮಹಲದಾರ.
ತತ್ಪುರುಷಲೋಕದಲ್ಲಿ ಅನಾಹತವೆಂಬ ಠಾಣ್ಯ;
ಈಶ್ವರನೆಂಬ ಗೌಡ .
ಈಶಾನ್ಯಲೋಕದಲ್ಲಿ ವಿಶುದ್ಧಿಯೆಂಬ ಠಾಣ್ಯ;
ಸದಾಶಿವನೆಂಬ ಪ್ರಧಾನಿ.
ಅಂಬರಲೋಕದಲ್ಲಿ ಆಜ್ಞೇಯವೆಂಬ ಠಾಣ್ಯ;
ಪರಶಿವನೆಂಬ ಅರಸು.
ನಾದಲಕ್ಷ ಬಿಂದುಲಕ್ಷ ಕಳಾಲಕ್ಷ
ಇಂತೀ ತ್ರಿವಿಧಲಕ್ಷವನೊಳಕೊಂಡು
ಪರಶಿವನೆಂಬ ಅರಸು ಕೂಡಿ
ವಿಶ್ವತೋ ಬೆಳಗಿಂಗೆ ಬೆಳಗಾಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Ondu muḷḷumoneya mēle
aravattu āru kōṭi paṭṭaṇaṅgaḷu puṭṭi'iddāvu nōḍā!
Pātāḷalōkadalli ādhāravemba ṭhāṇya;
brahmanemba mujumadāra.
Martyalōkadalli svādhiṣṭhavemba ṭhāṇya;
viṣṇuvemba huddeyadāra.
Svargalōkadalli maṇipūrakavembaṭhāṇya;
rudranemba mahaladāra.
Tatpuruṣalōkadalli anāhatavemba ṭhāṇya;
īśvaranemba gauḍa.
Īśān'yalōkadalli viśud'dhiyemba ṭhāṇya;
sadāśivanemba pradhāni.
Ambaralōkadalli ājñēyavemba ṭhāṇya;
paraśivanemba arasu.
Nādalakṣa bindulakṣa kaḷālakṣa
intī trividhalakṣavanoḷakoṇḍu
paraśivanemba arasu kūḍi
viśvatō beḷagiṅge beḷagāyittu nōḍā
jhēṅkāra nijaliṅgaprabhuve.