ದೇಗುಲದೊಳಗೆ ಒಬ್ಬ ಗಂಡಂಗೆ
ಐವರು ಹೆಂಡರಾಗಿಪ್ಪರು ನೋಡಾ.
ಕಂಡ ಕಂಡ ದಾರಿಯನಳಿದು ಮಂಡೆ ಬೋಳ ಮಾಡಿ
ಹೆಂಡರು ಆ ಗಂಡನ ಕೂಡಿದುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Dēguladoḷage obba gaṇḍaṅge
aivaru heṇḍarāgipparu nōḍā.
Kaṇḍa kaṇḍa dāriyanaḷidu maṇḍe bōḷa māḍi
heṇḍaru ā gaṇḍana kūḍiduda kaṇḍenayya
jhēṅkāra nijaliṅgaprabhuve.