Index   ವಚನ - 149    Search  
 
ಐವತ್ತೆರಡು ದೇಶವನು ಒಂದು ಕಪ್ಪೆ ನುಂಗಿ ಕೂಗುವುದ ಕಂಡೆನಯ್ಯ. ಆ ಕೂಗ ಕೇಳಿ ಒಂದು ಸರ್ಪನು ಸ್ವರ್ಗ ಮರ್ತ್ಯ ಪಾತಾಳವನೊಡೆದು ಆ ಕಪ್ಪೆಯ ನುಂಗಿದುದ ಕಂಡೆನಯ್ಯ. ಹಂತೆಲಿರ್ದ ಕೋಳಿ ಮೂವರ ನುಂಗಿದುದ ಕಂಡೆನಯ್ಯ, ಝೇಂಕಾರ ನಿಜಲಿಂಗಪ್ರಭುವೆ.