Index   ವಚನ - 164    Search  
 
ನವಗೃಹದ ಮೇಲೆ ನಿರ್ವಯಲೆಂಬ ಸತಿಯಳು ನಿಂದಿರುವುದನ್ನು ಕಂಡೆನಯ್ಯ. ಆಕಿಂಗೆ ಚಿದಾತ್ಮನೆಂಬ ಮಗ ಹುಟ್ಟಿ, ಐವರ ಸಂಗವ ಮಾಡಿ, ಸಾಸಿರದಳಕಮಲವ ಪೊಕ್ಕು, ಶಿಖಾಚಕ್ರವೆಂಬ ಮೆಟ್ಟಿಗೆವಿಡಿದು, ಪಶ್ಚಿಮದ್ವಾರವೆಂಬ ನಿರಂಜನಜ್ಯೋತಿಯ ಕೂಡಿ ನಿರವಯವೆಂಬ ಸತಿಯಳ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.