ಒಂದು ಲಿಂಗದ ಸಂಗದಿಂದ
ಒಬ್ಬ ಭಾಮಿನಿಯು ಹುಟ್ಟಿದಳು ನೋಡಾ!
ಆಕೆಯ ಒಡಲಲ್ಲಿ ಸ್ವರ್ಗ ಮರ್ತ್ಯ ಪಾತಾಳವ ಕಂಡೆನಯ್ಯ.
ಈರೇಳುಭುವನ ಹದಿನಾಲ್ಕು ಲೋಕಂಗಳ ಕಂಡೆನಯ್ಯ.
ಅಷ್ಟಕುಲಪರ್ವತವ ಕಂಡೆನಯ್ಯ.
ಸಪ್ತೇಳು ಸಾಗರವ ಕಂಡೆನಯ್ಯ.
ಹತ್ತು ಮೇರುವೆಯ ಮೀರಿ,
ಕಡೆಯ ಬಾಗಿಲ ಮುಂದೆ ನಿಂದಿರುವುದ ಕಂಡೆನಯ್ಯ.
ಅಲ್ಲಿಂದತ್ತತ್ತ ತನ್ನ ಗಮನವ ತಾನೇ ನುಂಗಿ,
ನಿರ್ವಯಲಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.