Index   ವಚನ - 930    Search  
 
ಇನ್ನೇವೆ ಇನ್ನೇವೆ? ಇದು ಮುನ್ನ ಮಾಯದಲಾದ ಭೂತದ ಲಿಂಗ. ಆಗಲಾಗದ ಮುನ್ನ ಆರೋಗಣೆಯಾಯಿತ್ತು, ಕೈದೊಳೆಯದ ಮುನ್ನ! [ಎಂಜಲು ಹೋಯಿತ್ತು] ನಾನಾಗದ ಮುನ್ನ ತಾನೆಯಾಯಿತ್ತು. ಗುಹೇಶ್ವರನೆಂಬ ಲಿಂಗ ಎನ್ನೊಳಗಡಗಿತ್ತು.