Index   ವಚನ - 204    Search  
 
ಮೂರು ಮುಖದ ಸೂಳೆ, ಆರನೆಯ ಸ್ಥಳದಲ್ಲಿ ನಿಂದು ಬೇರೆ ಒಬ್ಬಳ ಕೂಡಿಕೊಂಡು ಆರು ಕೇರಿಯ ಹೊಕ್ಕು ನೋಡುತಿರಲು, ಆ ಕೇರಿಗಳಲ್ಲಿ ಭಕ್ತಾಂಗನೆ ಉದಯವಾದಳು ನೋಡಾ. ಆ ಭಕ್ತಾಂಗನೆಯ ಸಂಗದಿಂದ ನಾಲ್ಕು ಮೂರ್ತಿಗಳ ಕೂಡಿ ಪರಕೆಪರವಾದ ಲಿಂಗವನಾಚರಿಸಿ ಆ ಮೂರುಮುಖದ ಸೂಳೆಯ ನೆರೆಯಬಲ್ಲ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.