ಅಂಗದೊಳಗೊಂದು ಮಂಗಳದ
ಹಕ್ಕಿ ಕುಳಿತಿಪ್ಪುದ ಕಂಡೆನಯ್ಯ.
ಆ ಹಕ್ಕಿಯ ಹಿಡಿದು ಹೋಗದ ಮುನ್ನ
ಅದು ಗಗನಕ್ಕೆ ಹಾರಿತ್ತು ನೋಡಾ!
ಹಕ್ಕಿ ಹೋಯಿತ್ತು ಲಿಂಗದ ಗುಡಿಗೆ.
ಮತ್ತೆ ಕಂಡನು ಒಬ್ಬ ತಳವಾರನು.
ಆ ತಳವಾರನು ಗದೆಯ ತಕ್ಕೊಂಡು ಇಡಲೊಡನೆ
ಮಂಗಳನೆಂಬ ಹಕ್ಕಿ ಬಿತ್ತು ನೋಡಾ!
ಇದ ನೀವಾರಾದಡೆ ಹೇಳಿರಯ್ಯ,
ನಾನಾದರೆ ಅರಿಯೆನು ಝೇಂಕಾರ ನಿಜಲಿಂಗಪ್ರಭುವೆ.