ನಾನೆಂಬ ನಾದಗಳು ಇಲ್ಲದಂದು,
ನೀನೆಂಬ ನಿನಾದಗಳಿಲ್ಲದಂದು,
ತಾನು ತಾನೆಂಬ ಅವಸ್ಥೆಗಳು ಇಲ್ಲದಂದು,
ಅತ್ತತ್ತಲೆ ನಿಶ್ಚಿಂತ ನಿರಾಕುಳನಾಗಿರ್ದೆಯಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Nānemba nādagaḷu illadandu,
nīnemba ninādagaḷilladandu,
tānu tānemba avasthegaḷu illadandu,
attattale niścinta nirākuḷanāgirdeyayya
jhēṅkāra nijaliṅgaprabhuve.