ಮಂಚದ ಎಕ್ಕೆಯಲ್ಲಿ ಸಣ್ಣ ಮಣಿಯ ಪೋಣಿಸಬಲ್ಲೆನೆಂಬುವರು
ನೀವಾರಾದಡೆ ಪೋಣಿಸಿರಯ್ಯ, ನಾನಾದರೆ ಅರಿಯೆನಯ್ಯ.
ಒಂದು ತೆಂಗಿನ ವೃಕ್ಷದ ಮೇಲೆ
ಮೂರು ರತ್ನವಿಪ್ಪುದ ನಾನು ಬಲ್ಲೆನಯ್ಯಾ.
ಒಂದು ರತ್ನ ಉತ್ಪತ್ತಿ ಸ್ಥಿತಿ ಲಯಕ್ಕೊಳಗಾಯಿತ್ತು ನೋಡಾ.
ಒಂದು ರತ್ನ ಚತುರ್ದಶಭುವನಕ್ಕೊಳಗಾಯಿತ್ತು ನೋಡಾ.
ಇನ್ನೊಂದು ರತ್ನಕೆ ಬೆಲೆ ಇಡಲಳವಲ್ಲ ನೋಡಾ.
ಆ ರತ್ನದ ಕುರುಹನರಿತು ನಿಶ್ಚಿಂತ
ನಿರಾಕುಳಲಿಂಗವನಾಚರಿಸಬಲ್ಲಾತನೆ
ನಿಮ್ಮ ನಿಃಕಲಶರಣ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.