Index   ವಚನ - 273    Search  
 
ಒಂಬತ್ತು ಸೋಪಾನದ ಮೇಲೆ ತುಂಬಿ ತೋರುತ್ತಿತ್ತಯ್ಯ ಒಂದು ಲಿಂಗ. ಆ ಲಿಂಗದ ಕುರುಹು ಬ್ರಹ್ಮ ವಿಷ್ಣು ರುದ್ರಾದಿಗಳಿಗೆ ಅಗೋಚರವೆನಿಸಿತ್ತು ನೋಡಾ. ನಿಃಶಬ್ದ ನಿರಾಳವಾದ ಶರಣನು ಆ ಲಿಂಗಧ್ಯಾನವ ಮಾಡುತಿರ್ಪನು ನೋಡಾ. ಝೇಂಕಾರ ನಿಜಲಿಂಗಪ್ರಭುವೆ.