Index   ವಚನ - 274    Search  
 
ಹುಟ್ಟಿದ ಮನವಿಲ್ಲ, ಬಂದ ಬಟ್ಟೆಗಳಿಲ್ಲ, ಹೋಗಿ ಹೋಗಿ ಬರಲಿಲ್ಲ, ಸೃಷ್ಟಿಯೊಳು ತಾನಾಗಲಿಲ್ಲ. ಭವಸಾಗರವ ಹರಿದು, ಬಟ್ಟಬಯಲನೊಳಕೊಂಡು ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.