Index   ವಚನ - 288    Search  
 
ಸಮುದ್ರದೊಳಗೊಂದು ಮೊಸಳೆಯ ಕಂಡೆನಯ್ಯ. ಆ ಮೊಸಳಿಂಗೆ ಏಳು ಮೀನುಗಳು ವಿಶ್ವಾಸಮಂ ಮಾಡುತಿರ್ಪುವು ನೋಡಾ! ಆಡುತಾಡುತ್ತ ತೆರೆ ಹಾಕಲು ಮೊಸಳೆ ಸತ್ತಿತು ನೋಡಾ. ಮೀನುಗಾರ ಬಂದು, ಮೀನ ಕೊಯ್ದು, ಸಮುದ್ರಕ್ಕೆ ಕಾವಲದಾರನಾದನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.