ಇಷ್ಟಲಿಂಗದಲ್ಲಿ ವಿಶ್ವಾಸ ಬಲಿದರೆ ಆಯತಲಿಂಗ.
ಆ ಇಷ್ಟಲಿಂಗದಲ್ಲಿ ಭಾವಮನೋವೇದ್ಯವಾದಲ್ಲಿ
ಸ್ವಾಯತಲಿಂಗ.
ಆ ಇಷ್ಟಲಿಂಗದ ಭಾವ
ಮನೋವೇದ್ಯವಾದ ಸುಖವು
ಭಿನ್ನವಾಗಿ ತೋರದೆ,
ಅನುಪಮ ಪರಿಣಾಮ ಭರಿತವಾದಲ್ಲಿ ಸನ್ನಿಹಿತಲಿಂಗ.
ಇಂತು, ಇಷ್ಟಲಿಂಗ ಪ್ರಾಣಲಿಂಗ
ತೃಪ್ತಿಯ ಭಾವಲಿಂಗಂಗಳೆಂಬ
ಲಿಂಗತ್ರಯಂಗಳು,
ತನುತ್ರಯಂಗಳ ಮೇಲೆ ಆಯತ
ಸ್ವಾಯತ ಸನ್ನಿಹಿತಂಗಳಾದ
ಶರಣನ ಪಂಚಭೂತಂಗಳಳಿದು ಲಿಂಗ ತತ್ತ್ವಂಗಳಾಗಿ,
ಆತನ ಜೀವ ಭಾವವಳಿದು ಪರಮಾತ್ಮನೆನಿಸಿದಲ್ಲಿ
ಷಡಂಗಯೋಗವಾದುದು ಕಾಣಾ ಗುಹೇಶ್ವರಾ.
Transliteration Iṣṭaliṅgadalli viśvāsa balidare āyataliṅga.
Ā iṣṭaliṅgadalli bhāvamanōvēdyavādalli
svāyataliṅga.
Ā iṣṭaliṅgada bhāva
manōvēdyavāda sukhavu
bhinnavāgi tōrade,
anupama pariṇāma bharitavādalli sannihitaliṅga.
Intu, iṣṭaliṅga prāṇaliṅga
tr̥ptiya bhāvaliṅgaṅgaḷemba
liṅgatrayaṅgaḷu,
tanutrayaṅgaḷa mēle āyata
svāyata sannihitaṅgaḷāda
śaraṇana pan̄cabhūtaṅgaḷaḷidu liṅga tattvaṅgaḷāgi,
ātana jīva bhāvavaḷidu paramātmanenisidalli
ṣaḍaṅgayōgavādudu kāṇā guhēśvarā.
Hindi Translation इष्टलिंग में विश्वास बढे तो आयत लिंग |
उस इष्ट लिंग में भावमनोवेद्य हो तो स्वायत लिंग |
वह इष्टलिंग भावमनोवेद्य हुवा सुख,
अभिन्न दिखाये तो, अनुपम परिणाम युक्त हो तो सन्निहित लिंग|
ऐसे इष्ट लिंग प्राण लिंग तृप्ति के भाव लिंग कहे लिंगत्रय,
तनुत्रयों पर आयत स्वायत सन्निहित बने
शरण के पंचभूत मिठकर लिंग तत्त्व बने,
उसका जीव भाव मिठे परमात्मा कहे तो
षडंगयोग हुआ देखा गुहेश्वरा|
Translated by: Eswara Sharma M and Govindarao B N