Index   ವಚನ - 410    Search  
 
ಸ್ಥೂಲವಾದರೇನಯ್ಯ? ಆ ಸ್ಥೂಲಕ್ಕೆ ಕ್ರಿಯವ ನಟಿಸಬೇಕಯ್ಯ. ಸೂಕ್ಷ್ಮವಾದರೇನಯ್ಯ? ಆ ಸೂಕ್ಷ್ಮಕ್ಕೆ ಮಂತ್ರವ ನಟಿಸಬೇಕಯ್ಯ. ಕಾರಣವಾದರೇನಯ್ಯ? ಆ ಕಾರಣಕ್ಕೆ ಸದಾಚಾರವ ನಟಿಸಬೇಕಯ್ಯ. ಮಹಾಕಾರಣವಾದರೇನಯ್ಯ? ಆ ಮಹಾಕಾರಣಕ್ಕೆ ಲಿಂಗಾಂಗಸಮರಸವ ನಟಿಸಬೇಕಯ್ಯ. ಪರ ಕಾರಣವಾದರೇನಯ್ಯ? ಆ ಪರಕಾರಣಕ್ಕೆ ನಿಃಶಬ್ದ ನಿರಾಳವ ನಟಿಸಬೇಕಯ್ಯ. ಜ್ಞಾನಕಾರಣವಾದರೇನಯ್ಯ? ಆ ಜ್ಞಾನಕಾರಣಕ್ಕೆ ಸ್ವಾನುಭವಸಿದ್ಧಾಂತವ ನಟಿಸಬೇಕಯ್ಯ. ಇಂತೀ ಷಡ್ವಿಧ ಅಂಗವನರಿತು ಆಚರಿಸಬಲ್ಲ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.