Index   ವಚನ - 414    Search  
 
ಮಾತಿನಲ್ಲಿ ಬ್ರಹ್ಮ, ನೀತಿಯಲ್ಲಿ ಕ್ರೋಧಿ. ಈ ಲೋಕದ ಭುಂಜಕರು, ನಾ ಹೆಚ್ಚು, ತಾ ಹೆಚ್ಚುಯೆಂದು ನಡೆದಾಡುವರಯ್ಯ. ನಾನು ನೀನೆಂಬ ಉಭಯವಳಿದು ತಾನು ತಾನಾದುದ ನಾನಾರನೂ ಕಾಣೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.