ಉದಮದದ ಯೌವನವನೊಳಕೊಂಡ ಸತಿ,
ನೀನು ಇತ್ತಲೇಕೆ ಬಂದೆಯವ್ವಾ?
ಸತಿ ಎಂದಡೆ ಮುನಿವರು ನಮ್ಮ ಶರಣರು.
ನಿನ್ನ ಪತಿಯ ಕುರುಹ ಹೇಳಿದಡೆ ಬಂದು ಕುಳ್ಳಿರು,
ಅಲ್ಲದಡೆ ತೊಲಗು ತಾಯೆ.
ನಮ್ಮ ಗುಹೇಶ್ವರನ ಶರಣರಲ್ಲಿ
ಸಂಗಸುಖಸನ್ನಿಹಿತವ ಬಯಸುವಡೆ
ನಿನ್ನ ಪತಿ ಯಾರೆಂಬುದ ಹೇಳಾ ಎಲೆ ಅವ್ವಾ?
Hindi Translationअहंकार युक्त यौवन से जुडी सति
तू क्यों इधर आयी अव्वा?
सति कहें तो गुस्सा होते हैं हमारे शरण।
तेरे पति की पहचान कहें तो आ बैठ !
नहीं तो चले जाओ माता।
हमारे गुहेश्वर के शरणों में
संगसुख सन्निहित चाहति हो तो
तेरे पति कौन है कह हे अव्व ?
Translated by: Eswara Sharma M and Govindarao B N