ಹಲವು ಕಡೆಗೆ ಹೊಯ್ದಾಡುವ ಮನವನೊಬ್ಬುಳಿಮಾಡಿ
ಘನತರವೆಂಬ ಲಿಂಗದಲ್ಲಿ ಕೂಡಿ
ಅಗಮ್ಯ ಅಗೋಚರ ಅಪ್ರಮಾಣನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Halavu kaḍege hoydāḍuva manavanobbuḷimāḍi
ghanataravemba liṅgadalli kūḍi
agamya agōcara apramāṇanāda nōḍā
jhēṅkāra nijaliṅgaprabhuve.