ಪೃಥ್ವಿ-ಅಪ್ಪು-ತೇಜ-ವಾಯು-ಆಕಾಶವೆಂಬ ಐದಂಗವ
ಒಂದು ಹಂಸ ನುಂಗಿ ಸುಳಿದಾಡುತಿಪ್ಪುದು ನೋಡಾ!
ಆ ಹಂಸಂಗೆ ಮೂವರು ಮಕ್ಕಳು ಹುಟ್ಟಿ
ಆರು ಕೇರಿಗಳಲ್ಲಿಪ್ಪರು ನೋಡಾ.
ಆ ಆರು ಕೇರಿಗಳಲ್ಲಿ ಹಾರಿ ಆಡುವ
ಹಾರುವಿತಿಯ ಕೊಂದು,
ಏಕೋಮನೋಹರನೆಂಬ
ಪೂಜಾರಿಯು ನಿಶ್ಚಿಂತ ನಿರಾಕುಳಲಿಂಗದಲ್ಲಿ ನಿಂದು
ತಾನು ತಾನಾಗಿ ಪೂಜೆಗೊಂಬ ಪರಿಯೆಂತು ಹೇಳಾ
ಝೇಂಕಾರ ನಿಜಲಿಂಗಪ್ರಭುವೆ?