ವಚನ - 961     
 
ಉಲಿವ ತರುವಲಿಗಳೆಲ್ಲ ಗಿಳಿವಿಂಡುಗೆಡೆದಿಹರು. ಅರಿಯದ ಮೌನಿಯ ಮುಕ್ತಿಯಿದೇನೊ? ಅರಿದಡೇನು ಅರಿಯದಿದ್ದಡೇನು, ತನ್ನಲ್ಲಿದ್ದ ವಸ್ತುವ ತಾನರಿಯದನ್ನಕ್ಕ? ಅಂಗದಲ್ಲಿ ಒದಗಿದ ಲಿಂಗವನರಿಯದೆ ಭಂಗಬಟ್ಟರು ಕಾಣಾ ಗುಹೇಶ್ವರಾ.