Index   ವಚನ - 531    Search  
 
ಕೋಣನ ಹಣೆಯ ಮೇಲೆ ಗಾಣಗಾರನ ಕಂಡೆನಯ್ಯ. ಆ ಗಾಣಗಾರಂಗೆ ಐವರು ಹೆಂಡರು, ಏಳುಮಂದಿ ಮಕ್ಕಳು, ಎಂಟುಮಂದಿ ನೆಂಟರು, ಹತ್ತುಮಂದಿ ಬಾಂಧವರು ಇಪ್ಪರು ನೋಡಾ. ಇದು ಕಾರಣ, ಆ ಕೋಣನ ಹಣೆ ಒಡೆದು, ಗಾಣಗಾರ ಸತ್ತು, ಜ್ಞಾನ ಉದಯವಾಗಲೊಡನೆ ಐವರು ಹೆಂಡರಡಗಿ, ಏಳುಮಂದಿ ಮಕ್ಕಳುಡುಗಿ, ಎಂಟುಮಂದಿ ನೆಂಟರು ಹೋಗಿ, ಹತ್ತುಮಂದಿ ಬಾಂಧವರು ಬಯಲಾದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.