ವಚನ - 965     
 
ಎಂಬತ್ತುನಾಲ್ಕು ಲಕ್ಷ ಜೀವರಾಶಿಗೂ ನೆಲನೊಂದೆ, ಜಲವೊಂದೆ. ಲೋಕಸಂಬಂಧಿಗೂ ಲಿಂಗಸಂಬಂಧಿಗೂ ನೆಲನೊಂದೆ ಜಲವೊಂದೆ, ವಿರಕ್ತರ ಹಸ್ತಮುಟ್ಟಿ ಬಂದ ಕಾರಣ ಅಗ್ಗವಣಿಯೆನಸಿತ್ತು, ಸಿತಾಳವೆನಸಿತ್ತು. ಇಂತಪ್ಪ ಸುಪವಿತ್ರದ ಅಗ್ಗವಣಿಯನೊಲ್ಲದೆ, ಅ[ನೇಕ] ಒರತೆಯ ನೀರಿಂಗೆರಗಿ ಬರುದೊರೆ ಹೋಹರಿಗೆ ಮರಳಿ ಭಕ್ತರ ಪೀಠವೇಕೆ ಹೇಳಾ ಗುಹೇಶ್ವರಾ?