Index   ವಚನ - 966    Search  
 
ಎಡದ ಕೈಯ ಲಿಂಗವ ಬಲದ ಕೈಯಲ್ಲಿ ಮುಟ್ಟಿ, ಸ್ಪರ್ಶನವ ಮಾಡುವ ಕರ್ಮಿಯ ನಾನೇನೆಂಬೆ! ಭವಭವದಲ್ಲಿ ಬಹ ಕರ್ಮಿಯ ನಾನೇನೆಂಬೆ! ಸತ್ಯವೇನವದಿರ, ಮಿಥ್ಯವೇನವದಿರ, ಹಿಡಿದ ಕೈ ತಾನೆ ಎಂದರಿಯರಾಗಿ. ಗುಹೇಶ್ವರಲಿಂಗವು ಬೆರಗಾದನು!