ಎನ್ನಂಗದಲ್ಲಿ ನಿಮಗೆ ಮಜ್ಜನ,
ಎನ್ನ ತುರುಬಿನಲ್ಲಿ ನಿಮಗೆ ಕುಸುಮಪೂಜೆ
ಎನ್ನ ನೇತ್ರದಲ್ಲಿ ನಿಮಗೆ ನಾನಾರೂಪು ವಿಚಿತ್ರ ನೋಟ.
ಎನ್ನ ಶ್ರೋತ್ರದಲ್ಲಿ ನಿಮಗೆ ಪಂಚ ಮಹಾವಾದ್ಯದ ಕೇಳಿಕೆ.
ಎನ್ನ ನಾಸಿಕದಲ್ಲಿ ನಿಮಗೆ ಸುಗಂಧ ಧೂಪ ಪರಿಮಳ.
ಎನ್ನ ಜಿಹ್ವೆಯಲ್ಲಿ ನಿಮಗೆ ಷಡುರಸಾನ್ನ ನೈವೇದ್ಯ.
ಎನ್ನ ತ್ವಕ್ಕಿನಲ್ಲಿ ನಿಮಗೆ ವಸ್ತ್ರಾಭರಣಾಲಂಕಾರ ಪೂಜೆ.
ಎನ್ನ ಆನಂದವೆಂಬ ಸಜ್ಜೆಗೃಹದಲ್ಲಿ ನೀವು
ಸ್ಪರುಸನಂಗೈದು ನೆರೆದಿಪ್ಪಿರಾಗಿ,
ನಾನು ನೀನೆಂಬೆರಡಳಿದು,
ತಾನು ತಾನಾದ ಘನವನೇನೆಂಬೆ ಗುಹೇಶ್ವರಯ್ಯಾ.
Transliteration Ennaṅgadalli nimage majjana,
enna turubinalli nimage kusumapūje
enna nētradalli nimage nānārūpu vicitra nōṭa.
Enna śrōtradalli nimage pan̄ca mahāvādyada kēḷike.
Enna nāsikadalli nimage sugandha dhūpa parimaḷa.
Enna jihveyalli nimage ṣaḍurasānna naivēdya.
Enna tvakkinalli nimage vastrābharaṇālaṅkāra pūje.
Enna ānandavemba sajjegr̥hadalli nīvu
sparusanaṅgaidu neredippirāgi,
nānu nīnemberaḍaḷidu,
tānu tānāda ghanavanēnembe guhēśvarayyā.
Hindi Translation मेरे शरीर में तुम्हें स्नान,
मेरे जूड़े में तुम्हें कुसम पूजा,
मेरे नेत्र में तुम्हें नाना रूप विभिन्न दृश्य
मेरे श्रोत्र में तुम्हें पंचमहावाद्य सुनाना
मेरे नासिक में तुम्हें सुगंध धूप परिमल ।
मेरी जिह्वा में तुम्हें षड्रसान्न नैवेद्य ।
मेरे चर्म में तुम्हें वस्त्राभरण अलंकार पूजा।
मेरे आनंद जैसे शय्यागृह में तुम स्पर्श कर मिलने से,
मैं तू कहे जैसे दोनों मिठे खुद बना
घन को क्या कहूँ गुहेश्वर अय्या।
Translated by: Eswara Sharma M and Govindarao B N