Index   ವಚನ - 618    Search  
 
ಸಾಗರದ ತುದಿಯ ಮೇಲೆ ಆಗರದ ಹಣ್ಣಾಗಿಪ್ಪುದು ನೋಡಾ. ಅಲ್ಲಿ ಒಬ್ಬ ಸತಿಯಳು ನಿಂದು, ಆ ಹಣ್ಣ ಹಿಡಿದು, ಶಿವಶರಣರಿಗೆ ತೋರುತಿಪ್ಪಳು ನೋಡಾ, ಆ ಹಣ್ಣ ಮುಟ್ಟಿ ಸ್ವೀಕರಿಸಬಲ್ಲ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.