Index   ವಚನ - 685    Search  
 
ನಾನೂ ಇಲ್ಲದೆ, ನೀನೂ ಇಲ್ಲದೆ, ತಾನೆಯಾದ ಶಿವನ ಸಂಗದಿಂದ ಒಬ್ಬ ಸತಿಯಳು ಪುಟ್ಟಿ, ಐವರ ಸಂಗವ ಮಾಡಿ, ನಿತ್ಯನಿಜದಲ್ಲಿ ನಿಂದು, ನಿಶ್ಚಿಂತ ನಿರಾಕುಳ ನಿರ್ಭರಿತನಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.