Index   ವಚನ - 704    Search  
 
ಅಣೋರಣಿಯಾನ್ ಮಹತೋಮಹೀಯಾನ್' ಎಂಬ ಶ್ರುತಿಗಳಿಲ್ಲದಂದು, ನಿರಾಮಯಲಿಂಗವು ತಾನೇ ನೋಡಾ. ಆ ಲಿಂಗವು ನೆನೆದ ನೆನಹು ಒಂದೇ ಮೂರು ತೆರನಾಯಿತ್ತು; ಮೂರೇ ಆರು ತೆರನಾಯಿತ್ತು. ಆರು ಮೂರರ ಭೇದವನು ಮಹಾಜ್ಞಾನದಿಂದ ತಿಳಿದು ನಿರಪೇಕ್ಷಲಿಂಗದಲ್ಲಿ ಕೂಡಿ, ನಿಸ್ಸಂಗಿ ನಿರಾಕುಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.