Index   ವಚನ - 703    Search  
 
ಬದ್ಧಜ್ಞಾನಿಯ ಸಂಗದಿಂದ ಅಭೇದ್ಯನಾದನಯ್ಯ. ಶುದ್ಧಜ್ಞಾನಿಯ ಸಂಗದಿಂದ ಪ್ರಸಿದ್ಧನಾದನಯ್ಯ. ನಿರ್ಮಲಜ್ಞಾನಿಯ ಸಂಗದಿಂದ ನಿಜಸ್ವರೂಪನಾದನಯ್ಯ. ಮನಜ್ಞಾನಿಯ ಸಂಗದಿಂದ ಅಗಮ್ಯನಾದನಯ್ಯ. ಸುಜ್ಞಾನಿಯ ಸಂಗದಿಂದ ಅಗೋಚರನಾದನಯ್ಯ. ಪರಮಜ್ಞಾನಿಯ ಸಂಗದಿಂದ ಅವಿರಳನಾದನಯ್ಯ. ಮಹಾಜ್ಞಾನಿಯ ಸಂಗದಿಂದ ಸ್ವಾನುಭವಸಿದ್ಧಾಂತನಾದನಯ್ಯ. ಸ್ವಯಜ್ಞಾನಿಯ ಸಂಗದಿಂದ ನಿಶ್ಚಿಂತನಾದನಯ್ಯ. ನಿರಂಜನನ ಸಂಗದಿಂದ ನಿರಾಕುಳನಾದನಯ್ಯ. ಝೇಂಕಾರನ ಸಂಗದಿಂದ ನಿರ್ಭರಿತನಾದನಯ್ಯ. ನಿರಾಮಯನ ಸಂಗದಿಂದ ತಾನು ತಾನೇಯಾಗಿರ್ದನಯ್ಯಾ ಝೇಂಕಾರ ನಿಜಲಿಂಗಪ್ರಭುವೆ.