Index   ವಚನ - 711    Search  
 
ದೇಗುಲದೊಳಗಿರುವ ದೇವರ ಕಂಡೆನಯ್ಯ. ಆ ದೇವಿದೇವರಸಂಗದಿಂ ಮಹಾಮಧುರಸ ತೊಟ್ಟಿಡುವುದ ಕಂಡೆನಯ್ಯ. ಆ ಮಧುರಸವನುಂಡು, ಪರಿಪೂರ್ಣಜ್ಞಾನಿಯಾಗಿ, ನಿಶ್ಚಿಂತ ನಿರಾಕುಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.