Index   ವಚನ - 738    Search  
 
ಆರು ಸ್ಥಲದಲ್ಲಿ ಆರು ಲಿಂಗವ ಕಂಡೆನಯ್ಯ. ಆರು ಲಿಂಗಸಂಗಸಮರಸದಿಂದ, ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನ ಪರಿಪೂರ್ಣ ನಿರವಯಲಿಂಗವು ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.