Index   ವಚನ - 741    Search  
 
ಅಂಗವಿಲ್ಲದ ನಾರಿಯು ಸಂಗವಿಲ್ಲದ ಪುರುಷನ ನೆರೆದು ಸಕಲ ಜಗಂಗಳ ಗರ್ಭೀಕರಿಸಿಕೊಂಡು, ಪರವಶದಲ್ಲಿ ನಿಂದು, ಪರಕೆಪರವಾದ ಸೋಜಿಗವ ನಾನೇನೆಂಬೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.