•  
  •  
  •  
  •  
Index   ವಚನ - 986    Search  
 
ಎಲೆ ಮನವೆ; ನೀ ನಿನ್ನ ನಿಜವ ತಿಳಿವಡೆ ಆ ನಿನ್ನ ನಿಜವ ಹೇಳುವೆ ಕೇಳು: ಅದು ಕೇವಲ ಜ್ಯೋತಿ, ಅದು ವರ್ಣಾತೀತ. ನೀನದನರಸುವಾಗ ನಿನಗಾವಲ್ಲಿ ನಿಶ್ಚಯ ತೋರಿತ್ತು, ಅದೀಗ ನಿನ್ನ ಪರಿಪೂರ್ಣತ್ವದ ನೆಲೆ. ಆ ನಿನ್ನ ನಿಜವ ನಿಶ್ಚಯಿಸಿ ನೀ ನಿರ್ಗಮನಿಯಾದಲ್ಲಿ ಅದೇ ನಿನ್ನ ಸಮ್ಯಕ್‍ಜ್ಞಾನದ ತೋರಿಕೆ! ಆ ತೋರಿಕೆಯ ಅಖಂಡ ಬೆಳಗಿನ ಹೊಳಹಿನೊಳಗೆ ನೀ ನಮ್ಮ ಗುಹೇಶ್ವರಲಿಂಗದ ಶ್ರೀಚರಣವನರಸಿಕೊಂಡು ನಿಶ್ಚಿಂತನಾಗೆಲೆ ಮನವೆ.
Transliteration Ele manave; nī ninna nijava tiḷivaḍe ā ninna nijava hēḷuve kēḷu: Adu kēvala jyōti, adu varṇātīta. Nīnadanarasuvāga ninagāvalli niścaya tōrittu, adīga ninna paripūrṇatvada nele. Ā ninna nijava niścayisi nī nirgamaniyādalli adē ninna samyak‍jñānada tōrike! Ā tōrikeya akhaṇḍa beḷagina hoḷahinoḷage nī nam'ma guhēśvaraliṅgada śrīcaraṇavanarasikoṇḍu niścintanāgele manave.
Hindi Translation अरे मन-तू तेरा सच जानना हो तो वह तेरा सच बताऊँगा सुनवह केवल ज्योति, वह वर्णनातीत । तू उसे ढूँढते वक्त तुझे वह निश्चय दिखाया था । वह अब तेरा परिपूर्णत्व का आधार । वह तेरा निज निर्णय कर तू निर्गमनि हुआ तो वहीं तेरे सम्यक ज्ञान का दिखावा। उस दिखावे के अखंड प्रकाश की चमक में तू हमारे गुहेश्वर लिंग के श्रीचरण ढूँढते निश्चिंत बनो हे मन । Translated by: Eswara Sharma M and Govindarao B N