Index   ವಚನ - 10    Search  
 
ಅಂಥ ಬ್ರಹ್ಮಾಂಡವ ಎಂಟುಸಾವಿರದ ಎಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ರೋಚಿಕಾಯೆಂಬ ಭುವನ. ಆ ಭುವನದೊಳು ಭವರೋಗಸಂಹಾರನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನಾಲ್ವತ್ತು ಕೋಟಿ ಬ್ರಹ್ಮ ನಾರಾಯಣ ರುದ್ರರು, ಇಂದ್ರಚಂದ್ರಾದಿತ್ಯರು, ನಾಲ್ವತ್ತು ಕೋಟಿ ವೇದಪುರುಷರು ಮುನೀಂದ್ರರು, ನಾಲ್ವತ್ತೊಂದುಕೋಟಿ ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.