Index   ವಚನ - 14    Search  
 
ಅಂಥ ಬ್ರಹ್ಮಾಂಡವ ಹನ್ನೆರಡುಸಾವಿರದ ನೂರಾಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು ವಿದ್ಯೆಯೆಂಬ ಭುವನ. ಆ ಭುವನದೊಳು ಅಕ್ಷಪಾದನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಅರವತ್ತುಕೋಟಿ ರುದ್ರ ನಾರಾಯಣ ಬ್ರಹ್ಮರು, ಇಂದ್ರಚಂದ್ರಾದಿತ್ಯರು, ಅರವತ್ತುಕೋಟಿ ವೇದಪುರುಷರು ಮುನೀಂದ್ರರು, ನಾಲ್ವತ್ತೈದುಕೋಟಿ ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.