Index   ವಚನ - 13    Search  
 
ಅಂಥ ಬ್ರಹ್ಮಾಂಡವ ಹನ್ನೊಂದುಸಾವಿರದ ನೂರಾಯೆಂಟು ಬ್ರಹ್ಮಾಂಡವನೊಳಕೊಂಡುದೊಂದು ಶಾಂತಿಯೆಂಬ ಭುವನ. ಆ ಭವನದೊಳು ತ್ರಿಪಾದನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಐವತ್ತೈದುಕೋಟಿ ಇಂದ್ರ ಬ್ರಹ್ಮ ರುದ್ರ ನಾರಾಯಣರು, ಐವತ್ತೈದುಕೋಟಿ ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು, ನಾಲ್ವತ್ತು ನಾಲ್ಕುಕೋಟಿ ದೇವರ್ಕಳಿಹರು ನೋಡಾ, ಅಪ್ರಮಾಣಕೂಡಲಸಂಗಮದೇವಾ.