Index   ವಚನ - 34    Search  
 
ಅಂಥ ಬ್ರಹ್ಮಾಂಡವ ಮೂವತ್ತೆರಡು ಸಾವಿರದಮುನ್ನೂರಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು ಕಲವಿಕರಣಿವೆಂಬ ಭುವನ. ಆ ಭುವನದೊಳು ಲಲಾಟಲೋಚನನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನೂರಾ ಅರವತ್ತುಕೋಟಿ ರುದ್ರ ಬ್ರಹ್ಮ ನಾರಾಯಣರು, ಇಂದ್ರ ಚಂದ್ರಾದಿತ್ಯರು, ನೂರಾ ಅರವತ್ತುಕೋಟಿ ವೇದಪುರುಷರು, ಮುನೀಂದ್ರರು, ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.