Index   ವಚನ - 35    Search  
 
ಅಂಥ ಬ್ರಹ್ಮಾಂಡವ ಮೂವತ್ತುಮೂರುಸಾವಿರದ ಮುನ್ನೂರಾಇಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಕಾಳಿಯೆಂಬ ಭುವನ. ಆ ಭುವನದೊಳು ಕಾಳಕಂಠ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನೂರಾ ಅರವತ್ತೈದುಕೋಟಿ ದೇವರ್ಕಳು, ಇಂದ್ರಚಂದ್ರಾದಿತ್ಯರು, ವೇದಪುರುಷರು, ಮುನೀಂದ್ರರು, ನೂರಾಅರವತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.