ಅಂಥ ಬ್ರಹ್ಮಾಂಡವ ಮೂವತ್ತುನಾಲ್ಕುಸಾವಿರದ
ಮುನ್ನೂರಾಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಬಲವಿಕರಣಿವೆಂಬ ಭುವನ.
ಆ ಭುವನದೊಳು ಬಾಲೇಂದುಮೌಳಿಯೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾ ಎಪ್ಪತ್ತುಕೋಟಿ ಇಂದ್ರ-ಬ್ರಹ್ಮ-ನಾರಾಯಣ-ರುದ್ರರು
ನೂರಾ ಎಪ್ಪತ್ತುಕೋಟಿ ಚಂದ್ರಾದಿತ್ಯರು, ವೇದಪುರುಷರು,
ಮುನೀಂದ್ರರು, ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Antha brahmāṇḍava mūvattunālkusāvirada
munnūrāmūvatteṇṭu
brahmāṇḍavanoḷakoṇḍudondu balavikaraṇivemba bhuvana.
Ā bhuvanadoḷu bālēndumauḷiyemba rudramūrti ihanu.
Ā rudramūrtiya ōlagadalli
nūrā eppattukōṭi indra-brahma-nārāyaṇa-rudraru
nūrā eppattukōṭi candrādityaru, vēdapuruṣaru,
munīndraru, dēvarkaḷiharu nōḍā
apramāṇakūḍalasaṅgamadēvā.