ಅಂಥ ಬ್ರಹ್ಮಾಂಡವ ನಾಲ್ವತ್ತೊಂದುಸಾವಿರದನೂರಾಯೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಏಕವೆಂಬ ಭುವನ.
ಆ ಭುವನದೊಳು ಏಕೀಶನನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರ ಐದುಕೋಟಿ ಬ್ರಹ್ಮ ನಾರಾಯಣ ರುದ್ರ, ಬ್ರಹ್ಮರು,
ಇಂದ್ರಚಂದ್ರಾದಿತ್ಯರು,
ಇನ್ನೂರಾ ಹತ್ತುಕೋಟಿ ವೇದಪುರುಷರು,
ಮುನೀಂದ್ರರು, ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Antha brahmāṇḍava nālvattondusāviradanūrāyeṇṭu
brahmāṇḍavanoḷakoṇḍudondu ēkavemba bhuvana.
Ā bhuvanadoḷu ēkīśananemba rudramūrti ihanu.
Ā rudramūrtiya ōlagadalli
innūra aidukōṭi brahma nārāyaṇa rudra, brahmaru,
indracandrādityaru,
innūrā hattukōṭi vēdapuruṣaru,
munīndraru, dēvarkaḷiharu nōḍā
apramāṇakūḍalasaṅgamadēvā.