Index   ವಚನ - 44    Search  
 
ಅಂಥ ಬ್ರಹ್ಮಾಂಡವ ನಾಲ್ವತ್ತೆರಡುಸಾವಿರದ ನೂರಾಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು ಪಿಂಗಳೇಕ್ಷಣವೆಂಬ ಭುವನ. ಆ ಭುವನದೊಳು ಮಹದಾನಂದನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಇನ್ನೂರಾಹತ್ತುಕೋಟಿ ನಾರಾಯಣ ರುದ್ರ ಬ್ರಹ್ಮರು, ಇಂದ್ರಚಂದ್ರಾದಿತ್ಯರು, ಇನ್ನೂರಾಹತ್ತುಕೋಟಿ ವೇದಪುರುಷರು, ಮುನೀಂದ್ರರು, ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.