ಅಂಥ ಬ್ರಹ್ಮಾಂಡವ ನಾಲ್ವತ್ತೈದು ಸಾವಿರದಾ ನಾನೂರಾನಾಲ್ವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವಾಮದೇವವೆಂಬ ಭುವನ.
ಆ ಭುವನದೊಳು ಹರಿಹರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾ ಇಪ್ಪತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರು,
ವೇದಪುರುಷರು ಮುನೀಂದ್ರರು ಇಹರು ನೋಡಾ,
ಇನ್ನೂರಾ ಇಪ್ಪತ್ತೈದು ಕೋಟಿ ಇಂದ್ರಚಂದ್ರಾದಿತ್ಯರು
ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Antha brahmāṇḍava nālvattaidu sāviradā nānūrānālvatteṇṭu
brahmāṇḍavanoḷakoṇḍudondu vāmadēvavemba bhuvana.
Ā bhuvanadoḷu hariharanemba rudramūrti ihanu.
Ā rudramūrtiya ōlagadalli
innūrā ippattaidukōṭi brahma-nārāyaṇa-rudraru,
vēdapuruṣaru munīndraru iharu nōḍā,
innūrā ippattaidu kōṭi indracandrādityaru
dēvarkaḷiharu nōḍā
apramāṇakūḍalasaṅgamadēvā.