Index   ವಚನ - 50    Search  
 
ಅಂಥ ಬ್ರಹ್ಮಾಂಡವ ನಾಲ್ವತ್ತೆಂಟುಸಾವಿರದಾ ನಾನೂರ ಎಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಏಕವೀರವೆಂಬ ಭುವನ. ಆ ಭುವನದೊಳು ಅನಂತಕೋಟಿ ಇಂದ್ರಸಂಹಾರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಇನ್ನೂರಾನಾಲ್ವತ್ತುಕೋಟಿ ಇಂದ್ರ-ನಾರಾಯಣ-ಬ್ರಹ್ಮ-ರುದ್ರರಿಹರು ನೋಡಾ. ಇನ್ನೂರಾ ನಾಲ್ವತ್ತುಕೋಟಿ ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ. ಅಪ್ರಮಾಣಕೂಡಲಸಂಗಮದೇವಾ.