ಅಂಥ ಬ್ರಹ್ಮಾಂಡವ ನಾಲ್ವತ್ತೇಳುಸಾವಿರದಾ ನಾನೂರಾ ಅರವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಶಿಖೇದವೆಂಬ ಭುವನ.
ಆ ಭುವನದೊಳು ಅನಂತವಿಷ್ಣುಸಂಹಾರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾ ಮೂವತ್ತೈದುಕೋಟಿ ದೇವರ್ಕಳು ವೇದಪುರುಷರು
ಮುನೀಂದ್ರರು,ಇಂದ್ರಚಂದ್ರಾದಿತ್ಯರು,
ಇನ್ನೂರಾಮೂವತ್ತೈದುಕೋಟಿ ಬ್ರಹ್ಮ ನಾರಾಯಣ ರುದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Antha brahmāṇḍava nālvattēḷusāviradā nānūrā aravatteṇṭu
brahmāṇḍavanoḷakoṇḍudondu śikhēdavemba bhuvana.
Ā bhuvanadoḷu anantaviṣṇusanhāranemba rudramūrti ihanu.
Ā rudramūrtiya ōlagadalli
innūrā mūvattaidukōṭi dēvarkaḷu vēdapuruṣaru
munīndraru,indracandrādityaru,
innūrāmūvattaidukōṭi brahma nārāyaṇa rudrariharu nōḍā
apramāṇakūḍalasaṅgamadēvā.